ಡಿಸೆಂಬರ್ 17 ರಂದು ‘ನನ್ನ ಪಕ್ಕದ ಸೀಟು’ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸಾಗರ : ಇಲ್ಲಿನ ಬಲಜಾಲಯ ಬಳಗದಿಂದ ಡಿಸೆಂಬರ್ 17ನೇ ಮಂಗಳವಾರದಂದು ಯುವ ಬರಹಗಾರರಾದ ಕೌಂಡಿನ್ಯ ಕೊಡ್ಲುತೋಟರವರ ಮೊದಲ ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹತ್ತೊಂಬತ್ತು ಸಣ್ಣ ಕಥೆಗಳುಳ್ಳ ಇನ್ನೂರು ಪುಟಗಳ ಪುಸ್ತಕವನ್ನು ಬೆಂಗಳೂರಿನ ಚಿನ್ಮಯ ಪ್ರಕಾಶನವು ಪ್ರಕಾಶಿಸಿದೆ.  


ಅಂದು ಸಂಜೆ 5ಗಂಟೆಗೆ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ. ಗಜಾನನ ಶರ್ಮಾರವರು ಬಿಡುಗಡೆಗೊಳಿಸಿ ಮಾತನಾಡಲಿದ್ದಾರೆ. ಕನ್ನಡ ಉಪನ್ಯಾಸಕರು ಮತ್ತು ಸಾಹಿತಿಗಳಾದ ಡಾ. ಸರ್ಫ್ರಾಜ್ ಚಂದ್ರಗುತ್ತಿರವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಅಷ್ಟಾವದಾನಿಗಳಾದ ಪ್ರಶಾಂತ್ ಮಧ್ಯಸ್ಥ ಅಧ್ಯಕ್ಷತೆ ವಹಿಸಲಿದ್ದು ಬೆಂಗಳೂರಿನ ಚಿನ್ಮಯ ಪ್ರಕಾಶನದ ನವೀನ್ ಥಿ ಪುರುಷೋತ್ತಮ್, ಪತ್ರಕರ್ತ ಮಾ.ವೆಂ.ಸ ಪ್ರಸಾದ್ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಸಂವತ್ಸರ, ಶ್ರೀರಂಜನಿ, ಶ್ರೀಧರ ಶಾನಭಾಗ್ ರಿಂದ ಗಾಯನ ನಡೆಯಲಿದ್ದು, ನಿಖಿಲ್ ಕುಂಸಿ ತಬಲಾ ಸಾತ್ ನೀಡಲಿದ್ದಾರೆ.

Post a Comment

0 Comments