ಪರೀಕ್ಷಾ ಪೇ ಚರ್ಚಾ' 8ನೇ ಆವೃತ್ತಿಗೆ ನೋಂದಣಿ ಆರಂಭವಾಗಿದೆ. 'ಪರೀಕ್ಷಾ ಪೇ ಚರ್ಚಾ' ಪ್ರಧಾನಿ ನರೇಂದ್ರ ಮೋದಿಯವರ ಅತ್ಯುತ್ತಮ ಯೋಜನೆಯಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ದೇಶದಾದ್ಯಂತ ಇರುವ ಮಕ್ಕಳೊಂದಿಗೆ ಬೋರ್ಡ್ ಪರೀಕ್ಷೆಗಳ ಒತ್ತಡ ಮತ್ತು ಭಯದ ಬಗ್ಗೆ ಮಾತನಾಡುವುದು ಮಾತ್ರವಲ್ಲದೆ ಅವರಿಗೆ ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಮೂಲಕ ಅವರ ನೈತಿಕತೆಯನ್ನು ಹೆಚ್ಚಿಸುತ್ತಾರೆ.
ಅರ್ಹತೆ:
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ 6 ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಪ್ರಸಕ್ತ ಸಾಲಿನ ಸ್ಪರ್ಧೆಯು ಬಹು ಆಯ್ಕೆಯ ಪ್ರಶ್ನೆ (MCQ)ಗಳಾಗಿವೆ. ಭಾಗವಹಿಸುವವರೆಲ್ಲರಿಗೂ ಪ್ರಮಾಣ ಪತ್ರ ದೊರೆಯುವುದು.
ಭಾಗವಹಿಸುವ ವಿಧಾನ:
https://innovateindia1.mygov.in/ 2025 ವೆಬ್ ಸೈಟ್ ಗೆ ಭೇಟಿ ನೀಡಿ 'ಪರೀಕ್ಷಾ ಪ ಚರ್ಚಾ" 2025 ಪರೀಕ್ಷಾ ಪೆ ಚರ್ಚಾ ಈ ಕಾರ್ಯಕ್ರಮದಲ್ಲಿನ ನಿಯಮಗಳನ್ನು ಓದಿಕೊಂಡು, ಭಾಗವಹಿಸಿ ಎಂಬ ಬಟನ್ ಕ್ಲಿಕ್ ಮಾಡುವುದು ಹಾಗೂ ತಮ್ಮ ಸ್ವವಿವರಗಳನ್ನು ನೀಡಿ, ಆನ್‌ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪುಸಕ್ತ ಸಾಲಿನ ಸ್ಪರ್ಧೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ಬರವಣೆಗೆ ಅವಕಾಶವಿದೆ ಭಾಗವಹಿಸುವವರೆಲ್ಲರಿಗೂ NCERT ನಿರ್ದೇಶಕರು ಸಹಿ ಮಾಡಿದ ಪ್ರಮಾಣ ಪತ್ರ ದೊರೆಯುವುದು. ವಿಜೇತರಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಆನ್ ಲೈನ್ ಮೂಲಕ ಪ್ರಧಾನ ಮಂತ್ರಿಯವರು ನೇರವಾಗಿ ಸಂವಹನ ನಡೆಸುವರು.
0 Comments