ಭಾರತದ ಎಲೆಕ್ಟ್ರಿಕ್ ವಾಹನ ವಲಯದಲ್ಲಿ 2030ರ ವೇಳೆಗೆ 50 ಮಿಲಿಯನ್ ಉದ್ಯೋಗ ಸೃಷ್ಟಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯ ಬೆಳವಣಿಗೆಯು ಮುಂದೆ ಉತ್ತಮವಾಗಿರುತ್ತದೆ. 2023ರ ವೇಳೆಗೆ ದೇಶದ ಇವಿ ವಲಯದಲ್ಲಿ ಸುಮಾರು 5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ  ಹೇಳಿದ್ದಾರೆ. 2030ರ ವೇಳೆಗೆ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಸಾಮರ್ಥ್ಯವು 20 ಲಕ್ಷ ಕೋಟಿ ರೂಪಾಯಿಗಳನ್ನ ತಲುಪುವ ಸಾಧ್ಯತೆಯಿದೆ ಎಂದು ಗಡ್ಕರಿ ಹೇಳಿದರು.


 ಭಾರತವು 22 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಳೆಯುಳಿಕೆ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತದೆ, ಇದು ಪ್ರಮುಖ ಆರ್ಥಿಕ ಸವಾಲಾಗಿದೆ. ಪಳೆಯುಳಿಕೆ ಇಂಧನಗಳ ಈ ಆಮದು ನಮ್ಮ ದೇಶದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಗಡ್ಕರಿ ಅವರ ಪ್ರಕಾರ, ಭಾರತದ ವಿದ್ಯುತ್ ಬಳಕೆಯ ಶೇಕಡಾ 44 ರಷ್ಟು ಸೌರಶಕ್ತಿಯಿಂದ ಬರುವುದರಿಂದ ಸರ್ಕಾರವು ಹಸಿರು ಶಕ್ತಿಯತ್ತ ಗಮನ ಹರಿಸುತ್ತಿದೆ. ಭಾರತದಲ್ಲಿ ಶೇಕಡಾ 40 ರಷ್ಟು ವಾಯು ಮಾಲಿನ್ಯವು ಸಾರಿಗೆ ವಲಯದಿಂದ ಉಂಟಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೇಳಿದ್ದಾರೆ.

Post a Comment

0 Comments