ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವ ಪ್ರಯುಕ್ತ ಡಿ.22 ರಂದು ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲೇಖಕರು, ಚಿಂತಕರು ಆದ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಒಂದು ದಿನದ ಭಗವದ್ಗೀತೆಯ ಕುರಿತಾದ ಕಾರ್ಯಾಗಾರ ನಡೆಯಲಿದೆ.
ಕಾರ್ಯಕ್ರಮದ ವಿಶೇಷತೆಗಳು :
> ಆಧುನಿಕ ಯುಗದ ಒತ್ತಡ - ಸಮಸ್ಯೆಗಳಿಗೆ ಪರಿಹಾರ
> ವಿದ್ಯಾಭ್ಯಾಸದ ಗೊಂದಲಗಳಿಗೆ ಉತ್ತರ, ಹದಿಹರೆಯದವರ ಮಾನಸಿಕ ತಲ್ಲಣಗಳಿಗೆ ಸಮಾಧಾನ
> ಯುವಕರ ಬದುಕಿಗೆ ಭಗವದ್ಗೀತೆಯ ಭರವಸೆಯ ಬೆಳಕು
ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಡಾ. ವಿಶ್ವನಾಥ ಸುಂಕಸಾಳ, ಶ್ರೀ ರೋಹಿತ್ ಚಕ್ರತೀರ್ಥ, ಶ್ರೀ ನಚಿಕೇತ್ ಹೆಗಡೆ,
ಡಾ. ನವೀನ್ ಗಂಗೋತ್ರಿ ಹೀಗೆ ಖ್ಯಾತ ವಿದ್ವಾಂಸರು ನಡೆಸಿಕೊಡುವ ಒಂದು ಅಪರೂಪದ ಕಾರ್ಯಾಗಾರ ನೀವು ಕೂಡ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಿ.
0 Comments