36 ಗ್ರೀನ್‌ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ : ನಿತಿನ್ ಗಡ್ಕರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ದೇಶದಲ್ಲಿ ನಡೆಯುತ್ತಿರುವ ರಸ್ತೆ ಜಾಲದ ವಿಸ್ತರಣೆಯ ಕುರಿತು, ಇಂದು 36 ಗ್ರೀನ್‌ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ನಡೆಯುತ್ತಿದೆ ಎಂದು ಇಂಡಿಯಾ ಎಕನಾಮಿಕ್ ಕಾನ್ಕ್ಲೇವ್‌ನಲ್ಲಿ ಹೇಳಿದರು. ಇದು ಅನೇಕ ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. 


ಇನ್ನು, ದೆಹಲಿ, ಡೆಹ್ರಾಡೂನ್, ಅಕ್ಷರಧಾಮದಲ್ಲಿ ರಸೆ ಮಾರ್ಗಗಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಮತ್ತು 15-20 ದಿನಗಳಲ್ಲಿ ಅದನ್ನು ಪ್ರಧಾನ ಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದೊಂದೇ 10,000 ಕೋಟಿ ರೂ.ಗಳ ದೊಡ್ಡ ಯೋಜನೆ. ಈ ರಸ್ತೆ ಮಾರ್ಗಗಳ ಮೂಲಕ ದೆಹಲಿಯಿಂದ ಡೆಹ್ರಾಡೂನ್‌ಗೆ 2 ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ನಂತರ ಮುಂಬೈ ದೆಹಲಿ ಎಕ್ಸ್‌ಪ್ರೆಸ್ ಬಗ್ಗೆ ಸಮ ಮಾಹಿತಿ ನೀಡ್ದದು, ನಾವು ಮುಂಬೈ ದೆಹಲಿ ಎಕ್ಸ್‌ಪ್ರೆಸ್ ರಸ್ತೆ ನಿರ್ಮಿಸಿದ್ದೇವೆ. ಅದು ಪೂರ್ಣಗೊಂಡಿದೆ, ಒಂದೂವರೆ ಎರಡು ತಿಂಗಳಲ್ಲಿ, ದೆಹಲಿಯಿಂದ ಜೈಪುರಕ್ಕೆ 2 ಗಂಟೆಗಳಲ್ಲಿ, ದೆಹಲಿಯಿಂದ ಅಮೃತಸರಕ್ಕೆ 4 ಗಂಟೆಗಳಲ್ಲಿ, ಕತ್ರಾ 6 ಗಂಟೆಗಳಲ್ಲಿ, ಶ್ರೀನಗರ 8 ಗಂಟೆಗಳಲ್ಲಿ, ದೆಹಲಿಯಿಂದ ಮನಾಲಿಗೆ 7-8 ಗಂಟೆಗಳಲ್ಲಿ ಮತ್ತು ದೆಹಲಿಯಿಂದ ಮುಂಬೈಗೆ 12 ಗಂಟೆಗಳಲ್ಲಿ, ಬೆಂಗಳೂರಿನಿಂದ ಚೆನ್ನೈಗೆ 2 ಗಂಟೆಗಳಲ್ಲಿ ಮತ್ತು ಮೈಸೂರಿನಿಂದ ಬೆಂಗಳೂರಿಗೆ 4 ಗಂಟೆಯಲ್ಲಿ ಪ್ರಯಾಣಿಸುವಂತಹ ಉತ್ತಮ ಗುಣಮಟ್ಟದ ರಸ್ತೆಗಳನ್ನುನಿರ್ಮಿಸಿದ್ದೇವೆ. ಈ ರೀತಿ ನಾವು 36 ಗ್ರೀನ್‌ ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Post a Comment

0 Comments