3 ದಿನಗಳ ವಿಶ್ವ ಹವ್ಯಕ ಸಮ್ಮೇಳನಕ್ಕೆ ಕ್ಷಣಗಣನೆ

ಇಂದಿನಿಂದ ಮೂರು ದಿನಗಳ ಕಾಲ ಅರಮನೆ ಮೈದಾನದ ಗೇಟ್ ನಂ.6 ರ ರಾಯಲ್ ಸೆನೆಟ್, ಗ್ರ್ಯಾಂಡ್ ಕ್ಯಾಸಲ್ ಆವರಣದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಹವ್ಯಕ ಲೋಕವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದರೆ.


ಇಂದು ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಸಾನಿಧ್ಯ ವಹಿಸಲಿದ್ದು , ಮಂತ್ರಾಲಯ , ಆದಿಚುಂಚನಗಿರಿ , ಪೇಜಾವರ , ಯದುಗಿರಿ ಮತ್ತು ಸುಬ್ರಮಣ್ಯ ಮಠದ ಶ್ರೀಗಳು ಪಾಲ್ಗೊಳ್ಳಲಿದ್ದಾರೆ . ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ಮಾಜಿ ಮುಖ್ಯಮಂತ್ರಿಗಳು , ಹಾಲಿ ಮಂತ್ರಿಗಳು , ಶಾಸಕರು , ಸಂಸದರು ಸೇರಿ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ .

ಅಖಿಲ ಹವ್ಯಕ ಮಹಾಸಭೆಗೆ 81 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ 2300 ಕಿ.ಮೀ ದೂರದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದ ಶ್ರೀರಾಮ ಕ್ಷೇತ್ರದಿಂದ ತರಲಾದ ಜ್ಯೋತಿಯಿಂದ ದೀಪವನ್ನು ಬೆಳಗಲಾಗುತ್ತದೆ. ಹಾಗೂ ಪೂಜ್ಯರಿಗೆ ಮತ್ತು ಗಣ್ಯರಿಗೆ 1081 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, 1081 ಮಕ್ಕಳಿಂದ ಪುಷ್ಪವೃಷ್ಟಿ, 1081 ಪುರುಷರಿಂದ ವೇದೋಷ ನಡೆಯಲಿದೆ.

3 ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತುಪ್ರದರ್ಶನ, ಆಹಾರ ಮೇಳ, ಕೃಷಿ ಕುರಿತಾದ ಮಾಹಿತಿ, ಸಾಧಕರ ಸನ್ಮಾನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಕರ್ನಾಟಕದ ಹಲವು ಭಾಗಗಳಿಂದ ಲಕ್ಷಾಂತರ ಮಂದಿ ಭಾಗವಹಿಸುವ ನೀರಿಕ್ಷೆಯಿದೆ.

Post a Comment

0 Comments