ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಇಲ್ಲಿ ಕೋಟ್ಯಾಂತರ ಮಂದಿ ಕೃಷಿಯನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆಯುವ ನಮ್ಮ ದೇಶ ವಿದೇಶಗಳಿಗೂ ನಮ್ಮ ಬೆಳೆಗಳನ್ನು ರಫ್ತು ಮಾಡುತ್ತಿದೆ. ಕೃಷಿಯನ್ನೇ ನಂಬಿರುವ ವರಿಗೆ ಸರ್ಕಾರದಿಂದ ಆರ್ಥಿಕ ನೆರವು ಅತ್ಯಗತ್ಯ. ಇದೀಗ ರೈತರಿಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ.
ಹೌದು ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು, ಭಾರತೀಯ ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಸಾಲವನ್ನು ನೀಡುತ್ತದೆ. ಈ ಯೋಜನೆಯು ರೈತರ ಕೃಷಿಗೆ ಅವಶ್ಯವಿರುವ ಟ್ರ್ಯಾಕ್ಟರ್‌ಗಳನ್ನು ಬಳಸಲು ಧನ ಸಹಾಯ ಮಾಡಿಕೊಡುತ್ತದೆ. ಈ ಯೋಜನೆಯಿಂದ ರೈತರ ಜೀವನವನ್ನು ಸುಧಾರಿಸುತ್ತದೆ. ಟ್ರಾಕ್ಟರ್ ಅನ್ನು ಸರಿಯಾಗಿ ಬಳಸುವುದರಿಂದ ಉತ್ಪನ್ನದ ಗುಣಮಟ್ಟ, ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಈ ಯೋಜನೆಯು ಸಹಾಯ ಮಾಡುತ್ತದೆ.
ಅರ್ಹತಾ ಮಾನದಂಡಗಳು ಹೀಗಿವೆ:
*ಈ ಯೋಜನೆಗೆ ಸೇರುವ ರೈತರು ಭಾರತದ ಪ್ರಜೆಗಳಾಗಿರಬೇಕು.
*ಇನ್ನು ಈ ಯೋಜನೆಯಡಿ ಪ್ರತಿಯೊಬ್ಬ ರೈತರು ಕೇವಲ ಒಂದು ಟ್ರ್ಯಾಕ್ಟರ್ ಮಾತ್ರ ಖರೀದಿಸಬಹುದು.
*ರೈತರು ಸಹಾಯಧನ ಪಡೆಯಲು ಕೆಲವು ದಾಖಲೆಗಳನ್ನ ಸಲ್ಲಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ ಪುಸ್ತಕ, ಭೂ ದಾಖಲೆಗಳು, ಮೊಬೈಲ್ ಸಂಖ್ಯೆಯನ್ನ ಆಧಾರ್ ಕಾರ್ಡ್'ಗೆ ಲಿಂಕ್ ಮಾಡಬೇಕು. ರೈತರಿಗೆ ಸಹಾಯ ಮಾಡಲು ಸರ್ಕಾರವು ಸಬ್ಸಿಡಿ ಸಾಲ ಮತ್ತು ಬಡ್ಡಿ ರಹಿತ ಸಾಲದಂತಹ ಅನೇಕ ಯೋಜನೆಗಳನ್ನ ಪರಿಚಯಿಸಿದೆ. ಈ ಯೋಜನೆಗಳು ರೈತರಿಗೆ ಸಾಕಷ್ಟು ನೆರವು ನೀಡುತ್ತವೆ. ಕೃಷಿ ಇಲಾಖೆಯು ರೈತರ ಬದುಕನ್ನ ಸುಧಾರಿಸಲು ಮತ್ತು ಅವರಿಗೆ ಅಗತ್ಯವಿರುವ ಪರಿಕರಗಳನ್ನ ಒದಗಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ರೈತರು ಅರ್ಹತಾ ಮಾನದಂಡಗಳನ್ನ ಪೂರೈಸುವ ಮೂಲಕ ಮತ್ತು ಅಗತ್ಯ ದಾಖಲೆಗಳನ್ನ ಸಲ್ಲಿಸುವ ಮೂಲಕ ಈ ಯೋಜನೆಯನ್ನ ಪಡೆಯಬಹುದು.
ಟ್ರ್ಯಾಕ್ಟರ್ ಇದ್ದರೆ ರೈತನಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದರೆ ಪ್ರಸ್ತುತ ಟ್ರ್ಯಾಕ್ಟರ್'ಗಳ ಬೆಲೆ ಕೈಗೆಟುಕುತ್ತಿಲ್ಲ. ಹೀಗಾಗಿ ರೈತರಿಗೆ ಅರ್ಧ ಬೆಲೆಯ ಟ್ರ್ಯಾಕ್ಟರ್ ನೀಡುವ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಡಿ, ಟ್ರ್ಯಾಕ್ಟರ್ ಖರೀದಿಯ ಮೇಲೆ 50 ಪರ್ಸೆಂಟ್ ಸಬ್ಸಿಡಿಯೊಂದಿಗೆ ಟ್ರ್ಯಾಕ್ಟರ್ಗಳನ್ನು ಖರೀದಿಸಲು ಸಾಧ್ಯವಿದೆ.
0 Comments