ಹಲವು ವರ್ಷಗಳಿಂದ ನಡೆಯುತ್ತಿರುವ ಸಾಂಸ್ಕೃತಿಕ ಕಲೆಗಳ ಕಲರವ ಆಳ್ವಾಸ್ ವಿರಾಸತ್‌ನ 30ರ ಆವೃತ್ತಿಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಚಾಲನೆ ನೀಡಲಾಯಿತು.
100ಕ್ಕೂ ಅಧಿಕ ದೇಶೀಯ ಜಾನಪದ ಕಲಾತಂಡಗಳು ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದಾರೆ.3000ಕ್ಕೂ ಅಧಿಕ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಸೇರಿದ್ದ ಸಾವಿರಾರು ಕಲಾಪ್ರೇಮಿಗಳೆದರು ಪ್ರದರ್ಶಿಸಿ ಅಧ್ಬುತ ಲೋಕವನ್ನೇ ಸೃಷಿಸಿದ್ದಾರೆ.
ತುಳುನಾಡ ಜಾನಪದ ಕಲೆ ಕಂಬುಳ, ಹುಲಿವೇಷ ಮೆರವಣಿಗೆಯಲ್ಲಿ ಅಬ್ಬರಿಸಿದವು. ಕೇರಳದ ತೆಯ್ಯಮ್, ಚಿಟ್ಟೆಮೇಳ, ಶಿವ ಅಘೋರಿಗಳು, ಕಿಂಗ್ ಕೋಂಗ್ ತಮ್ಮ ಪ್ರದರ್ಶನ ನೀಡಿದವು.ಚಿತ್ರದುರ್ಗ ಬ್ಯಾಂಡ್, ಪೂಜಾಕುಣಿತ ಬೆಂಡರ ಕುಣಿತ, ಮಹಿಳೆಯರ ಕೋಲಾಟ, ಹಗಲುವೇಷ ಪ್ರದರ್ಶನಗಳು ಜಾನಪದ ಕಲೆಗಳನ್ನು ಮತ್ತೊಮ್ಮೆ ನೆನಪಿಸುವ ಕೆಲಸವನ್ನು ಮಾಡಿವೆ.
ಈ ಆಳ್ವಾಸ್ ವಿರಾಸತ್‌ನಲ್ಲಿ 100ಕ್ಕೂ ಅಧಿಕ ಕಲಾಕೃತಿಗಳು ಲಲಿತಕಲಾ ಮೇಳದ ಸೊಬಗನ್ನು ಹೆಚ್ಚಿಸಿದೆ. ಕೈಮಗ್ಗಗಳ ಸೀರೆಯ ಪ್ರದರ್ಶನವು ಈ ಬಾರಿಯ ವಿಶೇಷ. ಸುಮಾರು 30ಕ್ಕೂ ಹೆಚ್ಚು ಮಳಿಗೆಗಳು ಇಲ್ಲಿವೆ ಜೊತೆಗೆ ಕೃಷಿ ಮೇಳ, ಛಾಯಾಚಿತ್ರ ಪ್ರದರ್ಶನ, ಆಹಾರ ಮೇಳ ಹೀಗೆ ಹತ್ತು ಹಲವು ಮೇಳಗಳು ನಡೆಯುತ್ತಿದ್ದು, ವಿರಾಸತ್ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ..
0 Comments