ಸಾಂಪ್ರದಾಯಿಕ ಯಕ್ಷಗಾನ ನಾಟ್ಯವನ್ನು ಮುಂದಿನ ಪೀಳಿಗೆಗೆ ದಾಟಿಸುವ ಅಪರೂಪದ ಕಾರ್ಯವನ್ನು ಸುಮಾರು 28 ವರ್ಷಗಳಿಂದ ಮಾಡುತ್ತಿರುವ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ಯಕ್ಷಗಾನ ನಾಟ್ಯ ಗುರುಗಳು ಸಬ್ಬಣಕೋಡಿ ರಾಮ ಭಟ್. ಅಲ್ಲದೇ ಕಡು ಬಡತನದಿಂದ ಬರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ಹೇಳಿಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ..
ಈ ಕೇಂದ್ರದಲ್ಲಿ ಸುಮಾರು 2000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ಕಲಿತ್ತಿದ್ದರೆ ಮಾತ್ರವಲ್ಲದೇ ಸಬ್ಬಣಕೋಡಿ ರಾಮ ಭಟ್ ಅವರು ಹಲವು ಶಾಲೆಗಳಲ್ಲಿ, ವಿವಿಧ ಕಡೆ ಯಕ್ಷಗಾನ ತರಗತಿಗಳನ್ನು ಮಾಡುತ್ತ ಸಾವಿರಾರು ಶಿಷ್ಯರನ್ನು ಯಕ್ಷಗಾನಕ್ಕೆ ಕೊಡುಗೆ ಆಗಿ ನೀಡಿರುವುದು ಇವರ ಸಾಧನೆ..ಈಗೀನ ಯಕ್ಷಗಾನ ಮೇಳಗಳಲ್ಲಿರುವ ಕಲಾವಿದರು ಅನೇಕರು ಸಬ್ಬಣ್ಣಕೋಡಿ ರಾಮ ಭಟ್ ಅವರ ಶಿಷ್ಯರು..ಯಕ್ಷಗಾನ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಇವರಿಗೆ ಜಿಲ್ಲಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ..ಕೇರಳ ಸರ್ಕಾರವು ವಿಶೇಷವಾಗಿ ಗುರುತಿಸಿದೆ..
ಯಕ್ಷಗಾನ ಕೇಂದ್ರ ನಡೆಸುವುದು ಸುಲಭದ ಮಾತಲ್ಲ ಆದರೂ ಪ್ರೀತಿಯಿಂದ ಮಾಡುತ್ತಿರುವ ಪ್ರತಿದಿನವೂ ಯಕ್ಷಗಾನಕ್ಕಾಗಿ ಜೀವನ ಮುಡಿಪಾಗಿಟ್ಟು ಯಕ್ಷಗಾನಕ್ಕೆ ದೊದ್ದದೊಂದು ಪೀಳಿಗೆಯನ್ನೇ ತಯಾರಿ ಮಾಡುತ್ತ ಯಕ್ಷಗಾನದ ಉಳಿವಿಗಾಗಿ ನಿರಂತರ ಶ್ರಮಿಸುತ್ತಿರುವ ಅವರ ಸಾಧನೆ ಯಕ್ಷಗಾನ ಕಲೆಯ ಮೇಲಿನ ಪ್ರೀತಿ ನಮಗೆಲ್ಲ ಪ್ರೇರಣೆ..ನಾನು ಕೂಡ ಯಕ್ಷಗಾನವನ್ನು 2ನೇ ತರಗತಿಯಿಂದ ಆರಂಭಿಸಿ ಪೂರ್ತಿ ಕಲಿತು ಹಲವು ವೇಷಗಳನ್ನು ಮಾಡಲು ಕಾರಣ ಗುರುಗಳಾದ ಸಬ್ಬಣ್ಣ ಕೊಡಿ ರಾಮ ಭಟ್ ಅವರ ಪ್ರೀತಿಗೆ ಸದಾ ಚಿರಋಣಿ...ಯಕ್ಷಗಾನ ಕಲಿಸುವ ಅವರ ಯಕ್ಷಗಾನ ಸೇವೆ ಸದಾ ಮುಂದುವರಿಯಲಿ ಎಂದು ಆಶಿಸೋಣ...ಪ್ರೋತ್ಸಾಹಿಸೋಣ
0 Comments