ಕಣ್ಮನ ಸೆಳೆಯುವ ಆಳ್ವಾಸ್ ವಿರಾಸತ್‌ನ ಸ್ತಬ್ಧ ಚಿತ್ರಗಳು ಹೇಗಿದೆ ನೋಡಿ...

 ಜೈನ ಕಾಶಿಯಾದ ಮೂಡಬಿದರೆಯ ನೆಲದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2024 ವೈಭವದಿಂದ ನಡೆಯುತ್ತಿದೆ. ಕೃಷಿ ಮೇಳ, ವಸ್ತುಪ್ರದರ್ಶನ, ಪುಷ್ಪ ಪ್ರದರ್ಶನ ನಿಜಕ್ಕೂ ಜನರ ಕಣ್ಮನ ಸೆಳೆಯುತ್ತಿದೆ.


ಆಳ್ವಾಸ್ ನ ಪ್ರತಿಯೊಂದು ದಿಕ್ಕುಗಳಲ್ಲಿ ನೋಡಬಹುದಾದ ಸ್ತಬ್ಧ ಚಿತ್ರಗಳು ಒಂದಕ್ಕಿಂತ ಒಂದು ಅಧ್ಬುತವಾಗಿ ಕಾಣುತ್ತವೆ. ಅಯೋಧ್ಯೆ ರಾಮ, ವನ್ಯ ಪ್ರಾಣಿಗಳು, ಅಜ್ಜಿ ಪುಟ್ಟ ಮಗುವನ್ನು ಹಿಡಿದುಕೊಂಡ ದೃಶ್ಯ, ದೇವಿ, ಕೋಟಿ ಚೆನ್ನಯ್ಯ ಹೀಗೆ ಹತ್ತು ಹಲವು ರೀತಿಯ ಎತ್ತರದ ಕಲಾಕೃತಿಗಳು ವೈವಿಧ್ಯಮಯ ಲೋಕವನ್ನೇ ಸೃಷ್ಟಿಸಿದೆ.


ರಾತ್ರಿಯ ಬಣ್ಣ ಬಣ್ಣದ ಬೆಳಕಿನ ಚಿತ್ತಾರ, ವೇದಿಕೆಯ ಅಲಂಕಾರ ಎಲ್ಲವೂ ಅಧ್ಬುತ ಲೋಕ...5 ದಿನಗಳ ಕಾಲ ಅಂದರೆ ಡಿಸೆಂಬರ್ 15 ರ ವರೆಗೆ ನಡೆಯುವ ಆಳ್ವಾಸ್ ವಿರಾಸತ್‌ಗೆ ಭೇಟಿ ನೀಡಿ...ವಿರಾಸತ್‌ನ ಸಿಹಿಯನ್ನು ಆಸ್ವಾದಿಸಿ..





      ಪುಷ್ಪಗಳ ನೋಡುವೆ ಮೈದಳೆದ ಶ್ರೀಕೃಷ್ಣನ ದಿವ್ಯ ರೂಪ..


ಎತ್ತಿನ ಗಾಡಿಯ ಜಾನಪದ ಸೊಗಡಿನ ಸ್ತಬ್ಧ ಚಿತ್ರ





ಹೀಗೆ ಹತ್ತು ಹಲವು ಬಗೆಯ ವೈವಿಧ್ಯಮಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌


Post a Comment

1 Comments

  1. ಉಪಯುಕ್ತವಾದ ಮಾಹಿತಿ

    ReplyDelete