ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಸಾಧನೆ ಮೆಚ್ಚಿದ ಪ್ರಧಾನಿ | ಡಿ.ಗುಕೇಶ್ ಯಾರು ?

ಮೋದಿ!18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಗುಕೇಶ್ ಸಾಧನೆಯನ್ನು ಪ್ರಧಾನಿ ಮೋದಿ ಅವರು, ಕೊಂಡಾಡಿದ್ದಾರೆ.


ಗುಕೇಶ್ ಐತಿಹಾಸಿಕ ಗೆಲುವಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಐತಿಹಾಸಿಕ ಮತ್ತು ಅನುಕರಣೀಯ!

ಡಿ ಗುಕೇಶ್ ಅವರ ಗಮನಾರ್ಹ ಸಾಧನೆಗೆ ಅಭಿನಂದನೆಗಳು. ಇದು ಅವರ ಅನನ್ಯ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಅಚಲ ದೃಢಸಂಕಲ್ಪದ ಫಲ. ಅವರ ಗೆಲುವು ಚೆಸ್ ಇತಿಹಾಸದಲ್ಲಿ ಅವರ ಹೆಸರನ್ನು ಸ್ಮರಣೀಯಗೊಳಿಸಿರುವುದು ಮಾತ್ರವಲ್ಲದೆ ಲಕ್ಷಾಂತರ ಯುವ ಮನಸ್ಸುಗಳು ದೊಡ್ಡ ಕನಸು ಕಾಣಲು ಪ್ರೇರೇಪಿಸಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಡಿ ಗುಕೇಶ್ ಯಾರು ?

ತಮಿಳುನಾಡಿನ ಗುಕೇಶ್ ಅವರು ಮೇ 7, 2006 ರಂದು ಜನಿಸಿದರು. ಅವರ ಪೂರ್ಣ ಹೆಸರು ದೋಮರಾಜು ಗುಕೇಶ್. ಗುಕೇಶ್ ಅವರ ತಂದೆ ವೈದ್ಯರಾಗಿದ್ದರೆ, ಅವರ ತಾಯಿ ವೃತ್ತಿಯಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿದ್ದಾರೆ.

ತನ್ನ ಏಳನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದ ಗುಕೇಶ್ ಅವರಿಗೆ ಆರಂಭದಲ್ಲಿ ಭಾಸ್ಕರ್ ತರಬೇತಿ ನೀಡುತ್ತಿದ್ದರು. ಇದಾದ ನಂತರ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್‌ ವಿಶ್ವನಾಥನ್ ಆನಂದ್, ಗುಕೇಶ್ ಅವರಿಗೆ ತರಬೇತಿ ನೀಡಿದ್ದರು.


2015 ರಲ್ಲಿ ನಡೆದ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನ 9 ವರ್ಷದೊಳಗಿನವರ ವಿಭಾಗದಲ್ಲಿ ಮತ್ತು 2018 ರಲ್ಲಿ ನಡೆದ 12 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದಿಕೊಂಡಿದ್ದ ಗುಕೇಶ್ ಇದುವರೆಗೆ ಏಷ್ಯನ್ ಯೂತ್ ಚಾಂಪಿಯನ್‌ಶಿಪ್​ನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.

Post a Comment

0 Comments