ಭಾರತೀಯ ಅಂಚೆ ಮತ್ತು ದೂರಸಂಪರ್ಕ ಖಾತೆ ಹಾಗೂ ಹಣಕಾಸು ಸೇವೆಯ 50ನೇ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ ಅಂಚೆ ಇಲಾಖೆಯನ್ನು ಸಂಪೂರ್ಣ ಡಿಜಿಟಲ್ ವೇದಿಕೆಯನ್ನಾಗಿ ಪರಿವರ್ತಿಸುವ ಸಲುವಾಗಿ ವ್ಯಾಪಾರ ಪ್ರಕ್ರಿಯೆ ಪುನಾರಚನೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇ-ಕಾಮರ್ಸ್ ವಲಯದ ಬೆಳವಣಿಗೆಯ ಸಂದರ್ಭದಲ್ಲಿ ಇಲಾಖೆಯ ಈ ಪರಿವರ್ತನೆಯು ಅಗತ್ಯವಾಗಿದ್ದು ಈ ಹೊಸ ವ್ಯಾಪಾರ ಮಾರ್ಗದಲ್ಲಿ ಅಂಚೆ ಸೇವೆಗಳ ಪ್ರಸ್ತುತತೆಯನ್ನು ಉಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಸರಕುಸಾಗಣೆ ನಿಗಮವಾಗಿ (ಲಾಜಿಸ್ಟಿಕ್ಸ್ ಕಾರ್ಪೆರೇಷನ್) ಅಂಚೆ ಇಲಾಖೆ ಪರಿವರ್ತನೆಯಾಗಲಿದೆ. ಈ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಸಂಸ್ಥೆಯಾಗಲಿದೆ. 1.64 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿರುವ ಇಲಾಖೆ ಈಗಾಗಲೇ ಜಗತ್ತಿನ ಅತಿ ದೊಡ್ಡ ವಿತರಣಾ ಜಾಲ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣ ಅಂಚೆ ಸಿಬ್ಬಂದಿ ಈಗಲೂ ಮನೆ ಮನೆಗೆ ಭೇಟಿ ನೀಡುತ್ತಾರೆ' ಎಂದು ವಿವರಿಸಿದರು.
0 Comments