ತುಳುನಾಡಿನ ಸಂಸ್ಕೃತಿಯನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಸಿನಿಮಾ 'ದಸ್ಕತ್'

ತುಳು ಚಲನಚಿತ್ರರಂಗ ಕೇವಲ ಹಾಸ್ಯ ಸಿನಿಮಾಗಳಿಗೆ ಮಾತ್ರ ಸೀಮಿತ ಎಂಬ ಮಾತನ್ನು ಬದಲಾಯಿಸುವ ಸಮಯ ಬಂದೆ ಬಿಟ್ಟಿತು. ಹೌದು ಕೇವಲ ಕಾಮಿಡಿ ಸಿನಿಮಾಗಳನ್ನು ಮಾಡುತ್ತಿದ್ದ, ತುಳು ಚಿತ್ರರಂಗ, ತುಳುನಾಡಿನ ಸಾರವನ್ನು ತಿಳಿಸುವಂತಹ ಚಲನಚಿತ್ರವನ್ನು ಪ್ರೇಕ್ಷಕರ ಕೈಗೆ ನೀಡಿದೆ. ಮನಸಲ್ಲಿ ಅಚ್ಚಳಿಯದಂತಹ ಅನುಭವ ನೀಡುವ ಸಿನಿಮಾ ಅನೀಶ್‌ ಪೂಜಾರಿ ವೇಣೂರು ನಿರ್ದೇಶನದ ʼದಸ್ಕತ್ʼ.


ತುಳುಚಿತ್ರರಂಗಕ್ಕೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ʼದಸ್ಕತ್ʼ ಎನ್ನುವ ಹೆಸರಿನ ತುಳುಚಿತ್ರ ಡಿಸೆಂಬರ್ 13 ರಂದು ತೆರೆ ಕಂಡಿದ್ದು, ಕಾಮಿಡಿ ಕಿಲಾಡಿಗಳು ಶೋನ ಕಲಾವಿದ ಅನೀಶ್ ಕುಮಾರ್ ವೇಣೂರು ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಈ ಸಿನಿಮಾದಲ್ಲಿ ಕನ್ನಡ ಚಲನಚಿತ್ರ ನಟ ಮೋಹನ್ ಶೇಣಿ, ಸಿರಿಯಲ್ ನಟಿ ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವು ಹಿರಿಯ ಮತ್ತು ಹೊಸ ಮುಖಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.

ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳೂ ನಾಯಕನಾಯಕಿಯರೇನೋ ಅನ್ನುವ ಹಾಗೆ ಭಾಸವಾಗುತ್ತದೆ. ಸಿನೆಮಾ ಕಡೆಗೆ ಆ ಪಾತ್ರಗಳ ಕೊಡುಗೆ ಅದ್ಭುತ. ತುಳುನಾಡಿನ ಆಚಾರ, ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಎತ್ತಿ ಹಿಡಿಯುವುದರ ಜೊತೆಗೆ ಸರಕಾರದ, ಜಾತಿ ವ್ಯವಸ್ಥೆಯ ಒಂದಷ್ಟು ವಿಚಾರಗಳಿಗೆ ಈ ಚಿತ್ರ ಕನ್ನಡಿ ಹಿಡಿದಿದೆ. 

ಚಿಗುರು ಪ್ರೀತಿ, ತಾಯಿಯ ಅಕ್ಕರೆ, ನಗು, ಅಳು, ಹೀಗೆ ನವರಸಗಳ ಮಿಶ್ರಣವಾಗಿರುವ ಈಸಿನೆಮಾದ ಮುಖ್ಯ ಆಕರ್ಷಣೆ ಛಾಯಾಗ್ರಹಣ ಮತ್ತು ಸಂಗೀತ. ಗಟ್ಟಿ ಕಥೆಯನ್ನೇ ನಂಬಿರುವ ಚಿತ್ರ ತುಳು ರಂಗಕ್ಕೆ ಹೊಸ ಆಯಾಮ ನೀಡುವಂತಿದೆ. ಈ ಚಿತ್ರದ ಬಳಿಕ ಕಾಮಿಡಿ ಹೊರತಾದ ತುಳು ಸಿನಿಮಾಗಳನ್ನು ತರುವ ಧೈರ್ಯವನ್ನು ನಿರ್ಮಾಪಕರು ತೋರಬಹುದು.

ತುಳುನಾಡಿನ ಗ್ರಾವೀಣ ಪ್ರತಿಭೆಗಳ ಸಮ್ಮಿಲನವಾಗಿರುವ ಈ ಚಿತ್ರದಲ್ಲಿ, ತುಳುನಾಡಿನ ದಿಗ್ಗಜರೆನೀಸಿಕೊಂಡಿರುವವರು ಕಾಣಿಸುವುದಿಲ್ಲ. ಈ ಸಿನಿಮಾವು ಹೊಸ ಮುಖಗಳಿಗೆ ಅವಕಾಶ ನೀಡಿ ಭೇಶ್ ಎನಿಸಿಕೊಂಡಿದೆ.

ತುಳುನಾಡನ್ನು ಅಪ್ಪಿರುವಂತೆ ಭಾಸವಾಗಿಸುವ ಈ ಸಿನೆಮಾ, ಮನದಲ್ಲಿ ಅಚ್ಚಳಿಯದ ಒಂದು ಸಹಿ ಹಾಕುವ ಚಿತ್ರ ದಸ್ಕತ್. ಒಂದು ಕಲಾತ್ಮಕ ಅನುಭವವನ್ನು ಆಸ್ವಾದಿಸಬೇಕೆಂದರೆ ನೀವು ಸಿನೆಮಾ ನೋಡಬೇಕು.

Post a Comment

0 Comments