ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆಯಲು ಮತ್ತೊಂದು ಅವಕಾಶ ನೀಡಲಾಗಿದೆ. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸುಮಾರು 5 ಕೋಟಿ ಮಹಿಳಾ ಸದಸ್ಯರು ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದರು.
ಯಾರೆಲ್ಲಾ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ...
ಅರ್ಜಿ ಸಲ್ಲಿಸಲು ಅರ್ಹತೆ :
ಭಾರತೀಯ ಮಹಿಳಾ ಪ್ರಜೆಯಾಗಿರಬೇಕು
ಈಗಾಗಲೇ ಇತರೆ ಎಲ್ ಪಿಜಿ ಸಂಪರ್ಕ ಹೊಂದಿರಬಾರದು
18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಾಗಿರಬೇಕು
ಬಿಪಿಎಲ್ ಕಾರ್ಡ್ ದಾರರಾಗಿರಬೇಕು
ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರು ಅರ್ಹರು
ಆರ್ಥಿಕವಾಗಿ ಹಿಂದುಳಿದ ವರ್ಗದವರು ಅರ್ಹರು
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೂ ಅರ್ಹರು
ಏನೆಲ್ಲಾ ದಾಖಲೆಗಳು :
ಆಧಾರ್ ಕಾರ್ಡ್
ಪಡಿತರ ಚೀಟಿ
ಬ್ಯಾಂಕ್ ಪಾಸ್ ಬುಕ್
ಮೊಬೈಲ್ ನಂಬರ್
ವಾಸಸ್ಥಳ ದೃಢೀಕರಣ
ಪಾಸ್ ಪೋರ್ಟ್ ಸೈಝ್ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ ?
ಆನ್ ಲೈನ್ ಮೂಲಕ https://pmuy.gov.in/ ಎಂಬ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಇಲ್ಲಿ ಕೇಳುವ ಮಾಹಿತಿಗಳನ್ನು ನೀಡಿ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಪ್ ಲೋಡ್ ಮಾಡಬೇಕು. ಇದಲ್ಲದೇ ಹೋದರೆ ಎಲ್ ಪಿಜಿ ತುರ್ತು ಸಹಾಯವಾಣಿ ನಂಬರ್ 1906 ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
0 Comments