ಇಂದಿನಿಂದ ಮಂಗಳೂರು ಕರಾವಳಿ ಉತ್ಸವ | ಏನೆಲ್ಲಾ ವಿಶೇಷತೆಗಳಿವೆ ?

ತುಳುನಾಡಿನ ನೈಜ ಸಂಸ್ಕೃತಿಯ ಅನಾವರಣಗೊಳಿಸುವ ಸಲುವಾಗಿ ಕರಾವಳಿ ಉತ್ಸವದಲ್ಲಿ  ಡಿ.21ರಿಂದ 2025ರ ಜ.19ರವರೆಗೆ ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿನ ಸಂಪ್ರದಾಯಗಳ ಪ್ರದರ್ಶನ, ಆಹಾರಗಳ ಪರಿಚಯ, ವಿವಿಧ ವಿನೋದಾವಳಿಗಳ ಮೂಲಕ ಇಲ್ಲಿನ ಧೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ಕಡೆ ಆಸ್ವಾದಿಸಲು ಅವಕಾಶ ಕಲ್ಪಿಸಲಾಗುತ್ತಿದೆ. 



 ಏನೆಲ್ಲಾ ವಿಶೇಷತೆಗಳಿವೆ ?

ವಸ್ತು ಪ್ರದರ್ಶನ:
 'ಜಾಗತಿಕ ಹಳ್ಳಿ' ಪರಿಕಲ್ಪನೆಯಲ್ಲಿ ಕರಾವಳಿಯ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಉಡುಗೆ ತೊಡುಗೆ ಮತ್ತು ಖಾದ್ಯಗಳನ್ನು, ಇಲ್ಲಿನ ವಿವಿಧ ಜನಾಂಗಗಳ ರೀತಿ ರಿವಾಜುಗಳನ್ನು ಪರಿಚಯಿಸುವ ಉದ್ದೇಶದಿಂದ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕೈಮಗ್ಗ ನೇಕಾರರು, ಕುಂಬಾರರು, ಕರಕುಶಲ ವಸ್ತುಗಳ ತಯಾರಕರು, ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದವರು ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

ಆಹಾರ ಮೇಳ: 
'ತುಳುನಾಡಿನ ತಿಂಡಿ ತಿನಿಸುಗಳ ಪ್ರದರ್ಶನ, ತಯಾರಿ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಇದರ ಜೊತೆಗೆ ಉಡುಗೆ ವೈವಿಧ್ಯ, ವಿವಿಧ ವಾಣಿಜ್ಯ ಮಳಿಗೆಗಳಿಗೆ ಅವಕಾಶ ನೀಡಲಿದ್ದೇವೆ. ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ವಿವಿಧ ವಿನೋದಾವಳಿಗಳೂ ಇರಲಿವೆ. 

ರೊಬೊಟಿಕ್ ಬಟರ್ ಫ್ಲೈ: 
ವಿಶೇಷ ಆಕರ್ಷಣೆ ಕದ್ರಿ ಉದ್ಯಾನದಲ್ಲಿ ಇದೇ 22ರಂದು ರೊಬೊಟಿಕ್ ಬಟರ್ ಫ್ಲೈ ಪಾರ್ಕ್‌ ಉದ್ಘಾಟನೆಗೊಳ್ಳಲಿದೆ. ಒಂದು ತಿಂಗಳು ಪೂರ್ತಿ ಇದರ ಪ್ರದರ್ಶನ ಇರಲಿದೆ. 2025ರ ಜ. 4 ಮತ್ತು ಜ. 5 ರಂದು ಕದ್ರಿ ಉದ್ಯಾನದಲ್ಲಿ ಅಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ ನಡೆಯಲಿದೆ. ಜ.11 ಮತ್ತು ಜ.12 ರಂದು ಯುವ ಉತ್ಸವ ನಡೆಯಲಿದೆ.

ಬೀಚ್ ಉತ್ಸವ ಗಾಳಿಪಟ ಉತ್ಸವದ ಮೆರುಗು

ಇದೇ 28 ಮತ್ತು 29ರಂದು ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ ಏರ್ಪಡಿಸಲಾಗಿದೆ. ಸಂಜೆ 6.30 ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನ ಸಂಗೀತ ಕಾರ್ಯಕ್ರಮಗಳು ಇರಲಿವೆ. ಇದೇ 28ರಂದು ರಾತ್ರಿ 8ರಿಂದ ರಘು ದೀಕ್ಷಿತ್ ಅವರ ತಂಡ ಕಾರ್ಯಕ್ರಮ ನೀಡಲಿದೆ. ಇದೇ 29 ರಂದು ಬೆಳಿಗ್ಗೆ 5.30ಕ್ಕೆ ಯೋಗ 6.30ಕ್ಕೆ ಜುಂಬಾ (ಏರೋನಾಟಿಕ್ಸ್) ಮತ್ತು 9ರಿಂದ ಬೀಚ್‌ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅಂದು ಸಂಜೆ 5.30ಕ್ಕೆ ನೃತ್ಯಪ್ರದರ್ಶನ ನಡೆಯಲಿದೆ. ರಾತ್ರಿ 8 ಗಂಟೆಗೆ ಶೋರ್ ಬ್ಯಾಂಡ್ ಪ್ರದರ್ಶನವಿರಲಿದೆ. 2025ರ ಜ.18 ಮತ್ತು ಜ.19 ರಂದು ತಣ್ಣೀರುಬಾವಿ ಕಿನಾರೆಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ .

Post a Comment

0 Comments