43 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಕುವೈತ್ ಗೆ ಭೇಟಿ ನೀಡಿದ್ದು, ಅಲ್ಲಿನ ಕುವೈತ್ ಭಾರತೀಯರು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಭಾರತ ಮತ್ತು ಕುವೈತ್ ನಡುವಿನ “ಬಹುಮುಖಿ” ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಈ ಭೇಟಿಯು ಅವಕಾಶವನ್ನು ಒದಗಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ.
ಕುವೈತ್‌ನಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, 101 ವರ್ಷದ ನಿವೃತ್ತ ಭಾರತೀಯ ವಿದೇಶಾಂಗ ಸೇವೆ ಇಲಾಖೆ ಅಧಿಕಾರಿ ಮಂಗಲ್ ಸೇನ್ ಹಂಡಾ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ.
ಭಾರತದ ಮಹಾನ್ ಧಾರ್ಮಿಕ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಅರೆಬಿಕ್ ಭಾಷೆಗೆ ತರ್ಜುಮೆ ಮಾಡಿರುವ ಅಬ್ದುಲ್ಲಾ ಬರೋನ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ಹಾಗೆಯೇ ಈ ಅರೆಬಿಕ್ ಭಾಷೆಯ ಗ್ರಂಥಗಳನ್ನು ಪ್ರಕಟಣೆ ಮಾಡಿದ ಅಬ್ದುಲ್ಲತೀಫ್ ಅಲ್ನೆಸೆಫ್ ಅವರನ್ನೂ ಪ್ರಧಾನಿ ಮೋದಿ ಭೇಟಿ ಮಾಡಿದರು.
ಪ್ರಧಾನಿ ಮೋದಿ ಆಗಮನಕ್ಕೆ ಕಾದು ಕುಳಿತಿದ್ದ ಅಬ್ದುಲ್ಲತೀಫ್ ಅಲ್ನೆಸೆಫ್ ಮತ್ತು ಅಬ್ದುಲ್ಲಾ ಬರೋನ್, ರಾಮಾಯಣ ಮತ್ತು ಮಹಾಭಾರತದ ಅರೆಬಿಕ್ ಆವೃತ್ತಿಯನ್ನು ಮೋದಿ ಅವರ ಕೈಗಿತ್ತರು.ಈ ವೇಳೆ ಇಬ್ಬರನ್ನೂ ಅಭಿನಂದಿಸಿದ ಪ್ರಧಾನಿ ಮೋದಿ, ನೀವು ಬಹಳ ಉತ್ತಮ ಕಾರ್ಯವನ್ನು ಮಾಡಿದ್ದೀರಿ ಎಂದು ಶಹಬ್ಬಾಸಗಿರಿ ನೀಡಿದರು. ಅಲ್ಲದೇ ಈ ಎರಡೂ ಪುಸ್ತಕಗಳ ಮೇಲೆ ತಮ್ಮ ಹಸ್ತಾಕ್ಷರ ಮಾಡಿದರು.
0 Comments