ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಸಿದ್ದ: ಪ್ರಹ್ಲಾದ್ ಜೋಶಿ



ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅಡಿಕೆ ಬೆಳಗಾರರ ಸಂಕಷ್ಟದ ಜೊತೆ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ.


ಅಡಿಕೆ ಬೆಳೆಗೆ ಸಂಬಂಧಿಸಿ ಹವ್ಯಕ ಸಮುದಾಯದ ಹಲವರು ತಮ್ಮನ್ನು ಭೇಟಿಯಾಗಿ ಅಡಿಕೆ ಬಗ್ಗೆ ವಿವಿಧ ರೀತಿಯ ವರದಿಗಳು ಬರುವ ಕುರಿತು ಚರ್ಚಿಸಿದ್ದಾರೆ. ಆದರೆ ಅಡಿಕೆ ಕೇವಲ ತಿನ್ನಲು ಮಾತ್ರ ಸೀಮಿತವಾಗಿಲ್ಲ. ಅಡಿಕೆ ಇಲ್ಲದೆ ವಿವಾಹ ನಡೆಯುವುದಿಲ್ಲ, ಶ್ರಾದ್ಧವೂ ಆಗುವುದಿಲ್ಲ. ಕೇಂದ್ರ ಸರಕಾರವು ಅಡಿಕೆ ಬೆಳೆಗಾರರ ಹಿತ ಕಾಪಾಡಲು ಬದ್ಧವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

3 ದಿನಗಳ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹಲವು ಗಣ್ಯರು ಭಾಗವಹಿಸಿದ್ದು, ಮೊದಲ ದಿನವೇ ಸಾವಿರಾರು ಜನ ಭಾಗವಹಿಸಿದ್ದಾರೆ.

Post a Comment

0 Comments