"ಆಯುಷ್ಮಾನ್ ವಯ ವಂದನಾ ಕಾರ್ಡ್" ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ?

ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ ಅಡಿ 70 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರಿಗೆ 5 ಲಕ್ಷ ವಿಮಾ ಕವರೇಜ್ ನೀಡಲಾಗುತ್ತಿದೆ. 2024ರ ಅಕ್ಟೋಬರ್ 29ರಂದು ಚಾಲನೆಗೊಂಡ ವಯ ವಂದನ ಸ್ಕೀಮ್​ನಲ್ಲಿ 50 ದಿನದಲ್ಲಿ 25 ಲಕ್ಷ ವೃದ್ಧರಿಗೆ ಕಾರ್ಡ್ ನೀಡಲಾಗಿದೆ. 22 ಸಾವಿರಕ್ಕೂ ಅಧಿಕ ವೃದ್ಧರು ಈಗಾಗಲೇ ಟ್ರೀಟ್ಮೆಂಟ್ ಪಡೆದಿದ್ದಾರೆ ಎಂದು ಹೇಳಲಾಗಿದೆ.



ಆನೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

ಹಂತ 1: ಮೊದಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡಿ.

ಹಂತ 2: ಅಲ್ಲಿರುವ ಆಯುಷ್ಮಾನ್ ವಯ ವಂದನಾ ಕಾರ್ಡ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ.

ಹಂತ 3: ಇದರ ದೃಢೀಕರಣಕ್ಕಾಗಿ ಒಟಿಪಿ ಪಡೆಯಲು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಹಂತ 4: ಬಳಿಕ ರಾಜ್ಯ ಜಿಲ್ಲೆ ಆಧಾ‌ರ್ ಸಂಖ್ಯೆ, ಪಿಎಂಜೆಎವೈ ಕಾರ್ಯಕ್ರಮದ ಹೆಸರು, ಪಿಎಂಜೆಎವೈ ಐಡಿ ಅಥವಾ ಕುಟುಂಬ ಐಡಿಯ೦ತಹ ನಿರ್ದಿಷ್ಟ ವಿವರಗಳನ್ನು ನಮೂದಿಸಿ.

ಹಂತ 5: ಬಳಿಕ ಕೆವೈಸಿ ಮಾಹಿತಿಗಳನ್ನು ಪೂರೈಸಿ. ಇತ್ತೀಚಿನ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಲು ಆಧಾರ್ ಒಟಿಪಿ ಅನ್ನು ಬಳಸಿ.

ಹಂತ 6: ಅನಂತರ ಕೇಳುವ ಗ್ರಾಮ, ಜಿಲ್ಲೆ, ಪಿನ್ ಕೋಡ್, ಮೊಬೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಹೆಚ್ಚುವರಿ ವಿವರಗಳನ್ನು ಸೇರಿಸಿ.

ಹಂತ 7: ಎಲ್ಲಾ ಮಾಹಿತಿಯನ್ನು ನಮೂದಿಸಿದ ಅನಂತರ ಅರ್ಜಿಯನ್ನು ಅಂತಿಮಗೊಳಿಸಲು "ಸಲ್ಲಿಸು" ಮೇಲೆ ಕ್ಲಿಕ್ ಮಾಡಿ.

ಹಂತ 8: ಬಳಿಕ ಅನುಮೋದಿಸಿದ ಅನಂತರ ಅದನ್ನು ಡೌನ್‌ಲೋಡ್ ಮಾಡಿ ಬಳಸಿಕೊಳ್ಳಬಹುದು

ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

ಆಯುಷ್ಮಾನ್ ವಯ ವಂದನಾ ಕಾರ್ಡ್ ಅನ್ನು ಆಫ್‌ಲೈನ್ ಮೂಲಕವೂ ಪಡೆದುಕೊಳ್ಳಬಹುದು. ಇದಕ್ಕಾಗಿ ಹತ್ತಿರದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (HWC) ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿ. 

ಆಯುಷ್ಮಾನ್ ವಯ ವಂದನಾ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆ (Qualifications) ?

ಆಯುಷ್ಮಾನ್ ವಯ ವಂದನಾ ಕಾರ್ಡ್ ಪಡೆಯಲು ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.
ಮುಖ್ಯವಾಗಿ 70 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಆದರೆ ಈ ಯೋಜನೆಗೆ ಯಾವುದೇ ಆದಾಯದ ಮಾನದ೦ಡಗಳು
ಇರುವುದಿಲ್ಲ.

ಆಯುಷ್ಮಾನ್ ವಯ ವಂದನಾ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು (Documents) :

ಆಧಾರ್ ಕಾರ್ಡ್
ಮೊಬೈಲ್ ಸಂಖ್ಯೆ
ಇಮೇಲ್ ಐಡಿ
ವಯಸ್ಸಿನ ಪುರಾವೆ

ಈ ಯೋಜನೆಯ ಅಂದಾಜು ವೆಚ್ಚ 3,437 ಕೋಟಿ ರೂ. ಆಗಿದೆ. ಇದರಲ್ಲಿ 2,165 ಕೋಟಿ ರೂ.ಗಳನ್ನು 2024-25 ರಲ್ಲಿ ಮತ್ತು 2025-26ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ವೆಚ್ಚ ಮಾಡುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ ಒಟ್ಟು 29,870 ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದ್ದು, ಈ ಪೈಕಿ 13,173 ಖಾಸಗಿ ಆಸ್ಪತ್ರೆಗಳಾಗಿವೆ.

Post a Comment

0 Comments