ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯವರೆಗೆ ವಿಸ್ತರಿಸುವ ಯೋಚನೆ

ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ಈಗ ಅನುಮತಿಗಾಗಿ ರೈಲ್ವೇ ಮಂಡಳಿಗೆ ಸಲ್ಲಿಸಲಾಗಿದೆ. ಈ ಬೇಡಿಕೆಗೆ ಅನುಮೋದನೆ ಸಿಕ್ಕಿದ್ದು, ಅದು ಹತ್ತಿರದ ಗ್ರಾಮೀಣ ಭಾಗದಲ್ಲಿ ಪ್ರಯಾಣಿಕರಿಗೆ ಅನುಕೂಲವನ್ನು ನೀಡಲಿದೆ.



ದಶಕಗಳ ಹಿಂದೆ ಮೀಟರ್ ಗೇಜ್ ಕಾಲದಲ್ಲಿ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ರೈಲು 2005 ರವರೆಗೆ ಸುಬ್ರಹ್ಮಣ್ಯದಿಂದ ಮಂಗಳೂರುವರೆಗೆ ಸಂಚರಿಸುತ್ತಿತ್ತು. ಆದರೆ ಹಳಿ ಪರಿವರ್ತನೆಗೊಂಡ ಬಳಿಕ ಅದು ಪುತ್ತೂರುವರೆಗೆ ಮಾತ್ರ ಸಂಚರಿಸಿತ್ತು. ಅನೇಕ ವರ್ಷಗಳಿಂದ ಸ್ಥಳೀಯರು ಮತ್ತು ನಾಯಕರ ಹೋರಾಟದ ಫಲವಾಗಿ, ಸಂಸದ ಬ್ರಿಜೇಶ್ ಚೌಟ ಅವರು ಈ ವಿಸ್ತರಣೆಗೆ ಸಂಸತ್ತಿನಲ್ಲಿ ಪ್ರಸ್ತಾಪನೆ ಸಲ್ಲಿಸಿ, ಸುಬ್ರಹ್ಮಣ್ಯವರೆಗೆ ರೈಲು ಸೇವೆಯನ್ನು ಪುನಃ ಆರಂಭಿಸಲು ಒತ್ತಾಯಿಸಿದ್ದರು.

Post a Comment

0 Comments