ಇ-ಸಂಜೀವಿನಿ ಒಪಿಡಿ ಸೌಲಭ್ಯದಡಿ ಸೇವೆ ಪಡೆದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈವರೆಗೂ 45,61,986 ಮಂದಿ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕ್ಷೇಮ ಕೇಂದ್ರದ ಸೇವೆಯಲ್ಲಿ 5ನೇ ಸ್ಥಾನದಲ್ಲಿದೆ. 1,86,43,191 ಸೇರಿ ರಾಜ್ಯದಲ್ಲಿ 2,32,05,177 ರೋಗಿಗಳು ವೈದ್ಯಕೀಯ ಸೌಲಭ್ಯ ಪಡೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ 'ಇ-ಸಂಜೀವಿನಿ ಒಪಿಡಿ' ಆನ್ಲೈನ್ ವೈದ್ಯಕೀಯ ಸೇವೆ ಪ್ರಾರಂಭಿಸಿತು. ಈಗ ಇದು ಮನೆ ಮಾತಾಗಿದೆ. ದೇಶಾದ್ಯಂತ ಕೋಟ್ಯಂತರ ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಯಾವುದೇ ರೀತಿಯ ಅನಾರೋಗ್ಯ ಕಂಡುಬಂದಲ್ಲಿ ಮನೆಯಿಂದಲೇ ವೈದ್ಯರನ್ನು ಸಂರ್ಪಸಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ಸೇವೆ ಪಡೆಯುವ ವಿಧಾನ:
ಮೊದಲಿಗೆ ಇ-ಸಂಜೀವಿನಿ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಅದರ ಮೂಲಕ ರೋಗಿಗಳು ಹೆಸರು ನೋಂದಾಯಿಸಬೇಕು. ಬಳಿಕ ಟೋಕನ್ ಜನರೇಟ್ ಆಗಲಿದ್ದು, ಸರತಿಯಂತೆ ಸೇವೆ ದೊರೆಯಲಿದೆ. ನಂತರ ವೈದ್ಯರೊಂದಿಗೆ ಆಡಿಯೋ-ವಿಡಿಯೋ ಮೂಲಕ ಸಮಾಲೋಚಿಸಬಹುದಾಗಿದೆ. ನಂತರ ಮೊಬೈಲ್ಗೆ ಔಷಧ ಹಾಗೂ ಹೆಚ್ಚಿನ ಚಿಕಿತ್ಸೆ ಪಡೆಯುವ ಕುರಿತು ಸೂಚನೆ ಬರಲಿದೆ. ಈ ಸಂದೇಶ ತೋರಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಹಾಗೂ ಸರ್ಕಾರಿ ಔಷಧಾಲಯಗಳಲ್ಲಿ ಉಚಿತವಾಗಿ ಔಷಧ ಪಡೆಯಬಹುದಾಗಿದೆ.
0 Comments