ಮೊದಲ ಪ್ರಯತ್ನದಲ್ಲೇ ಐಎಎಸ್ ಅಧಿಕಾರಿಯಾದ ಲಘಿಮಾ ತಿವಾರಿ

ಯುಪಿಎಸ್‌ಸಿ 2022 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ 19 ನೇ ರ್ಯಾಂಕ್ ಗಳಿಸಿರುವ ಲಘಿಮಾ ತಿವಾರಿಯು ದೆಹಲಿ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಲಘಿಮಾ, ಯಾವುದೇ ಕೋಚಿಂಗ್ ಇಲ್ಲದೆ ತನ್ನ ಮೊದಲ ಪ್ರಯತ್ನದಲ್ಲಿ ಐಎಎಸ್‌ ಸ್ಥಾನವನ್ನು ಸಾಧಿಸಿದ್ದಾರೆ.


ರಾಜಸ್ಥಾನದ ಅಲ್ವಾರ್ ನಿವಾಸಿ ಲಘಿಮಾ ಅವರು ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದಾಗ, ಯೂಟ್ಯೂಬ್‌ನಲ್ಲಿ ಟಾಪರ್‌ಗಳ ಸಂದರ್ಶನಗಳನ್ನು ನೋಡಿ ಲಘಿಮಾ ಬಹಳಷ್ಟು ಕಲಿತರು. ಯಾವುದೇ ಕೋಚಿಂಗ್‌ಗೆ ಸೇರುವ ಬದಲು, ಅವರು ಟೆಸ್ಟ್ ಸರಣಿ ಮತ್ತು ಸ್ವಯಂ-ಅಧ್ಯಯನವನ್ನು ಹೆಚ್ಚು ಅವಲಂಬಿಸಿದ್ದರು. ಈ ವಿಧಾನವೇ ಅವರಿಗೆ ಯಶಸ್ಸನ್ನು ತಂದುಕೊಟ್ಟಿತು.

ಲಘಿಮಾ ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ತನ್ನ ಐಚ್ಛಿಕ ವಿಷಯವಾಗಿ ಮಾನವಶಾಸ್ತ್ರವನ್ನು ಆರಿಸಿಕೊಂಡರು. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಯಾವುದೇ ಆಯ್ಕೆಯು ನಿಮಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ ಎಂಬುದನ್ನು ಈ ಮೂಲಕ ಅವರು ಸಾಬೀತುಪಡಿಸಿದರು.

ಲಘಿಮಾ ತನ್ನ ಯಶಸ್ಸಿನ ಮನ್ನಣೆಯನ್ನು ತನ್ನ ಹೆತ್ತವರಿಗೆ ನೀಡಿದ್ದಾರೆ. ಅವರ ಕುಟುಂಬ ಸದಾ ಜೊತೆಗಿದ್ದು, ಅವರ ಸ್ಫೂರ್ತಿಯಿಂದಲೇ ಯಶಸ್ಸು ಲಭಿಸಿದೆ ಎಂಬುವುದು ಅವರ ಹೇಳಿಕೆ

Post a Comment

0 Comments