ಕುಂಭಮೇಳ ಹೋಗಲು ಪ್ರಯಾಣಿಕರಿಗೆ ವಿಶೇಷ ರೈಲು

ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಮೈಸೂರಿನಿಂದ ಪ್ರಯಾಗ್ ರಾಜ್‌ಗೆ ವಿಶೇಷ ಏಕಮುಖ ಎಕ್‌ಪ್ರೆಸ್‌ ರೈಲು (06215) ಓಡಿಸಲಿದೆ.


ಮೈಸೂರು- ಪ್ರಯಾಗ್ ರಾಜ್ ಒನ್-ವೇ ಕುಂಭ ವಿಶೇಷ ಏಕಮುಖ ಎಕ್ಸ್‌ಪ್ರೆಸ್‌ ರೈಲು (06215) ಡಿ.23ರಂದು ಮಧ್ಯರಾತ್ರಿ 12:30 ಗಂಟೆಗೆ ಮೈಸೂರಿನಿಂದ ಹೊರಟು, ಡಿಸೆಂಬರ್ 25ರಂದು ಮಧ್ಯಾಹ್ನ 3:00 ಗಂಟೆಗೆ ಪ್ರಯಾಗ್ ರಾಜ್ ಜಂಕ್ಷನ್ ತಲುಪಲಿದೆ.

ರೈಲಿನ ಆಗಮನ ಮತ್ತು ನಿರ್ಗಮನದ ಮಾಹಿತಿ ತಿಳಿಯಲು ಪ್ರಯಾಣಿಕರು ಜಾಲತಾಣ:https://enquiry.indianrail.gov.in/mntes/ ಸಂಪರ್ಕಿಸಬಹುದು. ಸಹಾಯವಾಣಿ 139ಗೆ ಕರೆ ಮಾಡಬಹುದು.





Post a Comment

0 Comments