ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ : ಏರ್ ಪೋರ್ಟ್ ನಲ್ಲಿ ಅಗ್ಗದ ದರದ ನೀರು, ಆಹಾರಕ್ಕೆ `ಉಡಾನ್ ಕೆಫೆ’ ಆರಂಭ

 ನವದೆಹಲಿ: ವಿಮಾನ ನಿಲ್ದಾಣಗಳಲ್ಲಿನ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ನೀರಿನ ಬಾಟಲ್, ಕಾಫಿ, ಟೀ, ಊಟದ ದರ ಅತ್ಯಂತ ದುಬಾರಿಯಾಗಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಅಗ್ಗದ ದರದಲ್ಲಿ ನೀರು, ಆಹಾರ ಪದಾರ್ಥ ವಿತರಿಸಲು ಉಡಾನ್ ಯಾತ್ರಿ ಕೆಫೆ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.


ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದ್ದು, ಈ ಯೋಜನೆ ಯಶಸ್ವಿಯದಲ್ಲಿ ದೇಶವ್ಯಾಪಿ ವಿಸ್ತರಿಸಲು ನಾಗರೀಕ ವಿಮಾನಯಾನ ಸಚಿವಾಲಯ ಕ್ರಮ ಕೈಗೊಂಡಿದೆ.

ಸಣ್ಣ ನೀರಿನ ಬಾಟಲ್ ಗೆ 100 ರೂಪಾಯಿ, ಕಾಫಿ, ಟೀ ಗೆ 200 ರಿಂದ 250 ರೂ.ಗಿಂತ ಹೆಚ್ಚಿನ ದರವನ್ನು ವಿಮಾನ ನಿಲ್ದಾಣದ ರೆಸ್ಟೋರೆಂಟ್ ಗಳು ವಿಧಿಸುತ್ತಿವೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಂಸತ್ತಿನಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗಿತ್ತು. ಇದರ ಬೆನ್ನಲ್ಲೇ ವಿಮಾನಯಾನ ಸಚಿವಾಲಯ ಹೊಸ ಯೋಜನೆಗೆ ಚಾಲನೆ ನೀಡಿದೆ. ವಿಮಾನ ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ನೀರು, ಆಹಾರ ಪದಾರ್ಥ ಪೂರೈಸಲು ಉಡಾನ್ ಯಾತ್ರಿ ಕೆಫೆ ಯೋಜನೆಗೆ ಚಾಲನೆ ನೀಡಲಾಗಿದೆ.

ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ “ಉಡಾನ್ ಯಾತ್ರಿ ಕೆಫೆ” ಅನ್ನು ಪ್ರಾರಂಭಿಸುವುದರೊಂದಿಗೆ, ವಿಮಾನ ಪ್ರಯಾಣಿಕರು ನೀರಿನ ಬಾಟಲಿಗಳು, ಚಹಾ, ಕಾಫಿ ಮತ್ತು ತಿಂಡಿಗಳಂತಹ ಅಗತ್ಯ ವಸ್ತುಗಳನ್ನು ಸಮಂಜಸವಾದ ಬೆಲೆಯಲ್ಲಿ ಪಡೆಯಬಹುದು. ಸಂಸದರು ಈ ಕ್ರಮವನ್ನು ಸ್ವಾಗತಿಸಿದ್ದಾರೆ ಮತ್ತು ಅಂತಹ ಸೌಲಭ್ಯವನ್ನು ದೇಶದ ಇತರ ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ

Post a Comment

0 Comments