LIC 'ಬಿಮಾ ಸಖಿ ಯೋಜನೆ'ಗೆ ಪ್ರಧಾನಿ ಮೋದಿ ಚಾಲನೆ | ಏನಿದು ಯೋಜನೆ ?

ಭಾರತೀಯ ಜೀವ ವಿಮಾ ನಿಗಮದ (LIC) 'ಬಿಮಾ ಸಖಿ ಯೋಜನೆ'ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. LIC ಮುಂದಿನ 3 ವರ್ಷಗಳಲ್ಲಿ 2 ಲಕ್ಷ ಮಹಿಳಾ ವಿಮಾ ಏಜೆಂಟರನ್ನು ನೇಮಿಸುವ ಗುರಿಯನ್ನು  ಹೊಂದಿದೆ.

ಏನಿದು ಯೋಜನೆ ?

10ನೇ ತರಗತಿ ಪೂರೈಸಿದ 18 ರಿಂದ 70ರ ವಯೋಮಾನದ ಮಹಿಳೆಯರನ್ನು ಸಶಕ್ತಗೊಳಿಸಲು ಈ ಯೋಜನೆ ವಿನ್ಯಾಸಗೊಳಿಸಲಾಗಿದೆ. ತರಬೇತಿಯ ಅವಧಿ ಮೂರು ವರ್ಷವಾಗಿದ್ದು, ಈ ಅವಧಿಯಲ್ಲಿ ವಿಶೇಷ ತರಬೇತಿ ಮತ್ತು ಮಾಸಿಕ ಭತ್ಯೆ ಪಡೆಯುತ್ತಾರೆ.

ತರಬೇತಿಯ ಮೊದಲ ವರ್ಷದಲ್ಲಿ ಮಾಸಿಕ ₹7 ಸಾವಿರ, ಎರಡನೇ ವರ್ಷ ಮಾಸಿಕ ₹6 ಸಾವಿರ ಮತ್ತು ಮೂರನೇ ವರ್ಷದಲ್ಲಿ ಮಾಸಿಕ ₹5 ಸಾವಿರ ಭತ್ಯೆ ಪಡೆಯುತ್ತಾರೆ. ಕಮಿಷನ್‌ ಲಾಭ ಸಹ ಸಿಗಲಿದೆ. ಆರ್ಥಿಕ ಸಾಕ್ಷರತೆ ಹಾಗೂ ವಿಮೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಎಲ್‌ಐಸಿ ತಿಳಿಸಿದೆ.

ಮೂರು ವರ್ಷಗಳಲ್ಲಿ 2 ಲಕ್ಷ ಬಿಮಾ ಸಖಿಗಳನ್ನು ನೇಮಿಸುವ ಯೋಜನೆ ಇದೆ. ತರಬೇತಿ ಪೂರ್ಣಗೊಂಡ ಬಳಿಕ ಅವರು ಎಲ್‌ಐಸಿ ಪ್ರತಿನಿಧಿಗಳಾಗಿ ಕೆಲಸ ಮಾಡಬಹುದು. ಪದವಿ ಪೂರೈಸಿದ ಬಿಮಾ ಸಖಿಗಳು ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಗಳಾಗುವ ಅವಕಾಶ ಇರುತ್ತದೆ ಎಂದು ತಿಳಿಸಿದೆ.


ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೋಂದಣಿ ವಿವರಗಳು ಮತ್ತು ಅರ್ಜಿ ನಮೂನೆಗಳನ್ನು ಅಧಿಕೃತ LIC ವೆಬ್‌ಸೈಟ್‌ನಲ್ಲಿ ಲಭ್ಯ


Click Here To Apply :

Post a Comment

0 Comments