ಮಹಿಳೆಯರಿಗೆ ಮಾತ್ರ ಮೀಸಲಾಗಿರುವ 'ಮೋಟೊ ವಿಮೆನ್' (Moto Women) ಬೈಕ್ ಟ್ಯಾಕ್ಸಿ ಸೇವೆಯನ್ನು ಉಬರ್ ಪರಿಚಯಿಸಿದೆ.
ಗುರುವಾರ ಈ ಸೇವೆಯನ್ನು ಬೆಂಗಳೂರಿನಲ್ಲಿ ಪರಿಚಯಿಸಿದೆ.ಮಹಿಳೆಯರೇ ಚಲಾಯಿಸುವ ಈ ಬೈಕ್ ಟ್ಯಾಕ್ಸಿಯಲ್ಲಿ ಮಹಿಳೆಯರಿಗೆ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶ ಇದೆ.
ಮಹಿಳೆಯರಿಗೆ ಸುರಕ್ಷಿತ ಹಾಗೂ ಖಾಸಗಿತನ ರಕ್ಷಿಸುವ ಪ್ರಯಾಣ ಕಲ್ಪಿಸಲು ಹಾಗೂ ಚಾಲಕಿಯರು ದುಡಿಮೆ ಅವಕಾಶ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಉಬರ್ ಹೇಳಿದೆ. ಈಗಾಗಲೇ 300 ಚಾಲಕಿಯರು ನೋಂದಾಯಿಸಿಕೊಂಡಿದ್ದಾರೆ. ಒಂದೊಳ್ಳೆಯ ವ್ಯವಸ್ಥೆಯಾಗಿದ್ದ, ಮಹಿಳೆಯರಿಗೆ ಸಹಾಯವಾಗಲಿದೆ.
0 Comments