ಮತ್ತಷ್ಟು ದೇಶಗಳಲ್ಲಿ UPI ಪ್ರಗತಿ...

 UPI:-"ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್" ಅಥವಾ ಭಾರತದಲ್ಲಿ ಯುಪಿಐ ಎಂಬ ಸಂಸ್ಥೆ ದೇಶದ ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ ಯಾವ ರೀತಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿವೆ ಎಂದು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. NPCI ಮಾಡಿರುವ ಕ್ರಾಂತಿಯಿಂದಾಗಿ ಭಾರತದಲ್ಲಿ ಸದ್ಯ ಅತೀ ಹೆಚ್ಚು ಡಿಜಿಟಲ್‌ ಪಾವತಿಗಳಾಗುತ್ತಿದೆ.



ಕೇವಲ ಭಾರತದಲ್ಲೇ ಅಲ್ಲದೆ ಯುರೋಪ್‌ನ ಫ್ರಾನ್ಸ್‌ ಸೇರಿದಂತೆ ಹಲವಾರು ದೇಶಗಳಲ್ಲೂ ಯುಪಿಐ ವ್ಯವಸ್ಥೆ ಜಾರಿಯಾಗಿದ್ದು, ಭಾರತದ ಡಿಜಿಟಲ್‌ ಪರಾಕ್ರಮಕ್ಕೆ ಸಾಕ್ಷಿ ಎಂಬಂತಿದೆ. ಸದ್ಯ ಮುಂದಿನ ವರ್ಷದಿಂದ ಹೆಚ್ಚುವರಿ ನಾಲ್ಕರಿಂದ ಆರು ರಾಷ್ಟ್ರಗಳಿಗೂ ವಿಸ್ತರಿಸಲು ಸಜ್ಜಾಗಿದ್ದು, ಈ ಮೂಲಕ ಭಾರತದ ಶಕ್ತಿ ಇನ್ನಷ್ಟು ರಾಷ್ಟ್ರಗಳಿಗೂ ಹಬ್ಬಲು ಸಿದ್ದವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ NPCI ಸಿಇಒ ರಿತೇಶ್ ಶುಕ್ಲಾ, ಭಾರತದಲ್ಲಿ NPCI ಅತ್ಯಂತ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ನಾವು ಭಾರತದ ಹೊರಗೆ ಪಾಲುದಾರರನ್ನು ಹೊಂದಿದ್ದೇವೆ. ಅವರು ಯೋಜನೆಗಳನ್ನು ಪೂರ್ಣಗೊಳಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಯೋಜನೆಗಳು ಸಮಯಕ್ಕೆ ಪೂರ್ಣಗೊಂಡರೆ ಮುಂದಿನ ವರ್ಷ ನಾವು ಇನ್ನೂ 3-4 ದೇಶಗಳಲ್ಲಿ ಇದನ್ನು ಆರಂಭಿಸುವ ಭರವಸೆ ಹೊಂದಿದ್ದೇವೆ. 

UPI ಅನ್ನು ಅಂತರಾಷ್ಟ್ರೀಯವಾಗಿ ಬಳಸುವ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡಲು ನಾವು ಭಾರತದಲ್ಲಿನ ಬ್ಯಾಂಕ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ, ಬಳಕೆದಾರರು ವಿದೇಶಿ ಮಾರುಕಟ್ಟೆಗಳಿಗೆ ಬಂದಂತೆ ಅಧಿಸೂಚನೆಗಳನ್ನು ರಚಿಸಲು ಫಿನ್‌ಟೆಕ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಅಂತಾರಾಷ್ಟ್ರೀಯ ಟರ್ಮಿನಲ್‌ಗಳಲ್ಲಿ ಆರು ವಿಮಾನ ನಿಲ್ದಾಣಗಳಿಗೆ ಕೂಡ ವಿಸ್ತರಿಸುತ್ತಿದ್ದೇವೆ. ಈ ವ್ಯವಸ್ಥೆಗಳು ಸಿದ್ಧವಾದ ನಂತರ ಮೂಲಸೌಕರ್ಯ ಮಟ್ಟದಲ್ಲಿ, ದೇಶೀಯ ಪಾವತಿ ಅಗತ್ಯಗಳಲ್ಲಿ ನಾವು ಇತರ ದೇಶಗಳಿಗೆ ಸಾರ್ವಭೌಮರಾಗಲು ಸಹಾಯ ಮಾಡುತ್ತಿದ್ದೇವೆ. ದ್ವಿಪಕ್ಷೀಯ ಆಧಾರದ ಮೇಲೆ ಗಡಿಯಾಚೆಗಿನ ಹರಿವನ್ನು ಪೂರೈಸಲು ನಾವು ಅವುಗಳನ್ನು ಭಾರತದೊಂದಿಗೆ ಸಂಪರ್ಕಿಸಲು ನೋಡುತ್ತೇವೆ ಎಂದು ಅವರು ತಿಳಿಸಿದ್ದಾರೆ.


ವೃದ್ದಿಸುತ್ತಿರುವ ಭಾರತದ ವರ್ಚಸ್ಸು

ಯುಪಿಐ ವ್ಯವಸ್ಥೆಯಿಂದ ಭಾರತದ ಜಾಗತಿಕ ವರ್ಚಸ್ಸು ಭಾರೀ ಪ್ರಮಾಣದಲ್ಲಿ ವೃದ್ದಿಯಾಗಿದ್ದು, ಸದ್ಯ ಬಹುತೇಕ ರಾಷ್ಟ್ರಗಳು ಕೂಡ ಇದನ್ನು ತನ್ನ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಅಳವಡಿಸುವ ಯೋಜನೆ ಹಾಕಿಕೊಂಡಿದೆ. ಈ ಮೂಲಕ ಭಾರತದ ತಂತ್ರಜ್ಞಾನಕ್ಕೆ ಮಣೆ ಹಾಕಿದಂತಾಗಿದೆ.

Post a Comment

0 Comments