ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿಗಾಗಿ ಈ ಮೊದಲು ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ಕ್ಯೂ ನಿಂತು ಪೇ ಮಾಡಬೇಕಿತ್ತು. ಆದರೇ ಈಗ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಮತ್ತಷ್ಟು ಸರಳವಾಗಿದೆ. ನೀವು ಕುಳಿತಲ್ಲೇ ಆನ್ ಲೈನ್ ಮೂಲಕ ಪಾವತಿಸಬಹುದಾಗಿದೆ.
ಹೌದು ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಈಗ ಸುಲಭವಾಗಿದೆ. ನಿಮ್ಮ ಸ್ಮಾರ್ಟ್ ಪೋನ್ ನಲ್ಲೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಅದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಸ್ಮಾರ್ಟ್ ಪೋನ್ ಯುಗದಲ್ಲಿ ಸ್ಮಾರ್ಟ್ ಆಗೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸುವಂತ ವಿಧಾನವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಪರಿಚಯಿಸಿದೆ.
ರಾಜ್ಯದ ಗ್ರಾಮೀಣ ಜನರು ಗ್ರಾಮ ಪಂಚಾಯ್ತಿ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳದೇ ಕುಳಿತಲ್ಲೇ ಮೊಬೈಲ್ ನಲ್ಲಿ ಆಸ್ತಿ ತೆರಿಗೆ ಪಾವತಿಸೋದಕ್ಕೆ ಅವಕಾಶ ನೀಡಿದೆ.
ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸುವ ವಿಧಾನ
ನೀವು ಇದಕ್ಕಾಗಿ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಸೇರಿದಂತೆ ಇತರೆ ಆಪ್ ಡೌನ್ ಲೋಡ್ ಮಾಡ್ಕೊಳ್ಳಿ.
ಪ್ರತಿಯೊಂದು ಪಾವತಿ ಆಪ್ ಗಳಲ್ಲಿ ಬಿಲ್ ಪೇ ಎನ್ನುವಂತ ಆಫ್ಷನ್ ಇರುತ್ತದೆ. ಅಲ್ಲಿಗೆ ಭೇಟಿ ನೀಡಬೇಕು.
ಬಿಲ್ ಪೇ ಗೆ ತೆರಳಿದ ನಂತರ, ನೀವು ಬಾಪೂಜಿ ಸೇವಾ ಕೇಂದ್ರ ಎಂಬುದಾಗಿ ಟೈಪ್ ಮಾಡಿದರೆ, ಅದು ಲಭ್ಯವಾಗಲಿದೆ.
ಬಾಪೂಜಿ ಸೇವಾ ಕೇಂದ್ರದ ಆಯ್ಕೆಯಲ್ಲಿ Bapuji seva kendra(RDPR) ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.
ಈ ಬಳಿಕ ನೀವು ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀಡಿರುವಂತ Property/Plot Number ಕಾಲಂ ನಲ್ಲಿ ನಿಮ್ಮ ಆಸ್ತಿ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ಆಸ್ತಿಯ ಸಂಖ್ಯೆಯನ್ನು ನಮೂದಿಸಿದ ಬಳಿಕ, ಅದರ ಕೆಳಗಿನ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ. ನೀವು ಪಾವತಿಸಬೇಕಿರುವಂತ ಆಸ್ತಿ ತೆರಿಗೆ ಹಣವನ್ನು ತೋರಿಸಲಿದೆ.
ಇದಾದ ಬಳಿಕ ನೀವು ಪೇ ಎನ್ನುವಲ್ಲಿ ಕ್ಲಿಕ್ ಮಾಡಿದ್ರೇ, ನಿಮ್ಮ UPI ನಂಬರ್ ಕೇಳಲಿದೆ. ಅದನ್ನು ನಮೂದಿಸಿದ್ರೇ ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿಯಾಗಲಿದೆ.
ಹೀಗೆ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಮೂಲಕ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಸ್ಮಾರ್ಟ್ ಪೋನ್ ಇದ್ರೆ ಸಾಕು, ಕುಳಿತಲ್ಲೇ ಪೇ ಮಾಡಬಹುದು. ನಿಮಗೆ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಸ್ಮಾರ್ಟ್ ಪೋನ್ ನಲ್ಲಿ ಪಾವತಿ ಬಗ್ಗೆ ಅನುಮಾನಗಳಿದ್ದರೇ, ಸಮಸ್ಯೆ ಆಗುತ್ತಿದ್ದರೇ ಏಕೀಕೃತ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಿ ಪಡೆಯುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮನವಿ ಮಾಡಿದೆ.
0 Comments