ಮಂಗಳೂರು ನಗರದ ಕದ್ರಿ ಉದ್ಯಾನದಲ್ಲಿ ತರಹೇವಾರಿ ಪುಷ್ಪಗಳು ಮಂದಹಾಸ ಬೀರುತ್ತಿವೆ. ಸಾಲ್ವಿಯಾ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್, ಡೇಲಿಯಾ, ಪೆಟೂನಿಯಾ ಹೂಗಳು ಇರಲಿವೆ. ಜ.23ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಇರಲಿದೆ.
ಮೇಳದ ಅಂಗವಾಗಿ ಟೊಮೆಟೊ ಬೆಂಡೆ ಮೆಣಸು ಅಲಸಂಡೆ ಸೋರೆ ಸೇರಿದಂತೆ ಸುಮಾರು 1.5 ಲಕ್ಷ ಸಸಿಗಳನ್ನು ಪೊಟ್ರೇಯಲ್ಲಿ ಬೆಳೆಸಲಾಗಿದೆ. ಕೈತೋಟ ಪ್ರೇರೇಪಿಸುವ ಉದ್ದೇಶದಿಂದ ಮೇಳಕ್ಕೆ ಬರುವವರಿಗೆ ₹1ಕ್ಕೆ ಒಂದು ಸಸಿ ನೀಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಡಿಡಿ ಮಂಜುನಾಥ ಡಿ ಹೇಳಿದರು.
20 ಸಾವಿರ ಕುಂಡಗಳಲ್ಲಿ 30 ಜಾತಿಯ ಹೂಗಳನ್ನು ಬೆಳೆಸಲಾಗಿದೆ. ಇದರೊಂದಿಗೆ ತರಕಾರಿ ಕೆತ್ತನೆ, ಇಕಬೆನಾ ಹೂ ಜೋಡಣೆ, ಜೇನು ಉತ್ಪಾದನೆ, ಉತ್ಪನ್ನಗಳ ಪ್ರದರ್ಶನ, ಸಸ್ಯ ಉತ್ಸವ, ಪಶ್ಚಿಮ ಘಟ್ಟದ ಮುಖ್ಯ ಸಸ್ಯ ಪ್ರಭೇದಗಳ ಮಳಿಗೆ, ದೇಸಿ ಬೀಜಗಳು ಮೇಳದಲ್ಲಿ ಇರಲಿವೆ.
0 Comments