ಜನವರಿ-ಫೇಬ್ರವರಿಯಲ್ಲಿ 2,4 ಮತ್ತು 6ನೇ ಸೆಮಿಸ್ಟರ್ ತರಗತಿಗಳು ಆರಂಭವಾಗಲಿದ್ದು, ಶೈಕ್ಷಣಿಕ ಹಿತದೃಷ್ಟಿಯಿಂದ ಲಭ್ಯವಿರುವ ಕಾರ್ಯಭಾರಕ್ಕೆ ತಕ್ಕಂತೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಲಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.3ರಿಂದ 8ವರೆಗೆ ಅವಕಾಶವಿದೆ. ಜ.9ರಂದು ತಾತ್ಕಾಲಿಕ
ಮೆರಿಟ್ ಪಟ್ಟಿ ಪ್ರಕಟಿಸಲಿದೆ. ಇದಾದ ಬಳಿಕ ತಿದ್ದುಪಡಿಗೆ ಜ.10ರಿಂದ 11ರವರೆಗೆ ಅವಕಾಶವಿರಲಿದೆ. ಜ.13ರಂದು ತಾತ್ಕಾಲಿಕ ಕಾರ್ಯಭಾರ ಪ್ರಕಟ ಮಾಡಲಿದ್ದು, ಜ.20ರಿಂದ 29ರವರೆಗೆ ಮೆರಿಟ್ ಪಟ್ಟಿಯ ಅನ್ವಯ ಕಾಲೇಜು ಆಯ್ಕೆ ಕೌನ್ಸೆಲಿಂಗ್ ನಡೆಯಲಿದೆ. ಜ.30ರಂದು ಕೌನ್ಸೆಲಿಂಗ್‌ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ.
ಹೆಚ್ಚಿನ ಮಾಹಿತಿಗೆ https://dce.karnataka.gov.in ಭೇಟಿಮಾಡಿ.
0 Comments